ಪೇಸ್ ಮೇಕರ್ - ಗತಿರೂಪಕ

	ಹೃದಯದ ಕೃತಕ ಗತಿರೂಪಕ ಒಂದು ಎಲೆಕ್ಟ್ರಾನಿಕ್ ಸಾಧನ. ಅದು ಹೃದಯಕ್ಕೆ ವಿದ್ಯುತ್ ಪ್ರಚೋದನೆಯನ್ನು ನೀಡಿ ಮಂದನಾಡಿ (ಬ್ರಾಡಿಕಾರ್ಕಿಯ)ಗೆ ವೇಗಗತಿಯನ್ನು, ಮತ್ತು ವೇಗನಾಡಿಗೆ (ಟ್ಯಾಕಿಕಾರ್ಕಿಯ) ಮಂದಗತಿಯನ್ನು ತಂದು ಕೊಡುತ್ತದೆ. ಔಷಧ ಚಕಿತ್ಸೆಗೆ ಮಣಿಯದೆ ಈ ಸನ್ನಿವೇಶಗಳು ಇದ್ದಾಗ ಪೇಸ್ ಮೇಕರನ್ನು ಅಳವಡಿಸಿ ಹೃದಯ ಸ್ಪಂದನ ಸರಾಗವಾಗಿ ಜರುಗುವಂತೆ ಮಾಡಲಾಗುತ್ತದೆ.
	ಈ ಸಾಧನಕ್ಕೆ ಬ್ಯಾಟರಿ ಶಕ್ತಿಮೂಲ. ಅವು ಅಥಿಯಂ ಅಯೊಡೈಡ್‍ನಿಂದ ರೂಪುಗೊಂಡಿದ್ದು ಅವುಗಳ ಜೀವಿತ ಕಾಲಾವಧಿ ಏಳೆಂಟು ವರುಷಗಳು. ಅವುಗಳ ತೂಕ 30 ಗ್ರಾಮಿಗಿಂತಲೂ ಕಡಿಮೆ. ಅವುಗಳನ್ನು ಸಾಮಾನ್ಯವಾಗಿ ಚರ್ಮದಡಿ ಕೀಲಿಕದ (ಕ್ಲಾವಿಕಲ್) ಕೆಳಗಿನ ಪ್ರದೇಶದಲ್ಲಿ ನಾಟಿಮಾಡಲಾಗುತ್ತದೆ. ಅದು ಪ್ರಚೋದನೆಗಳಿಗೆ ಮತ್ತು ಜಾಲಕ್ಕೆ (ಸಕ್ರ್ಸೂಟ್) ಶಕ್ತಿಯನ್ನು ಪೂರೈಸುತ್ತದೆ. ಎಲೆಕ್ಟ್ರಾನಿಕ್ ಜಾಲವು ಪ್ರಚೋದನೆಗಳ ಸಮಯ ಮತ್ತು ಗುಣವಿಶೇಷವನ್ನು ನಿಯಂತ್ರಿಸುತ್ತದೆ. ತೂರ್ನಳಿಗೆ ಅಥವಾ ತಂತಿಯ ಮೇಲೆ ಇರಿಸಿದ ಎಲೆಕ್ಟ್ರೋರ್‍ಗಳ ಮಂಚೂಣಿ(ಲೀಠ್) ಬ್ಯಾಟರಿ ಮತ್ತು ಸಕ್ರ್ಸೂಟನ್ನು ಹೃದಯದ ಜೊತೆ ಸಂಬಂಧ ಕಲ್ಪಿಸುತ್ತದೆ.
	ಗತಿರೂಪಕಗಳು ಎರಡು ಮೂಲಭೂತ ಕಾರ್ಯಗಳನ್ನು ನಿರ್ವಹಿಸುತ್ತವೆ: 1. ಅವು ಹೃದಯವನ್ನು ಉತ್ತೇಜಿಸುವುದು, ಮತ್ತು 2. ಹೃದಯದಲ್ಲಿ ತಂತಾನೆ ಉದ್ಭವಿಸುವ ಆವೇಗಗಳನ್ನು ಅರಿತುಕೊಳ್ಳುವುದು. ಆ ಅರಿವಿನಿಂದ ಅವು ತಾವು ಕೇಡುಮಾಡುವ ಪ್ರಚೋದನೆಗಳನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಲ್ಲವು.
	ಪೇಸ್‍ಮೇಕರ್‍ನ ಮುಂಚೂಣಿ  ಎರಡು ಧ್ರುವಗಳನ್ನು (ಬೈಪೋಲಾರ್) ಹೊಂದಿದ್ದು, ಧನಾತ್ಮಕ ಅನೋಟ್ ಮತ್ತು ಋಣಾತ್ಮಕ ಕ್ಯಾಥೋಡದ ಹೃದಯ ಕೋಶದೊಡನೆ ಸಂಬಂಧ ಹೊಂದಿವೆ. ಇಂದು ಒಂದು ಧ್ರುವದ ಲೀಕ್‍ಗಳನ್ನು ಬಳಸುವುದು ಕಡಿಮೆಯಾಗಿದೆ.
	 ಲೀಡ್‍ಗಳನ್ನು ಶಿರೆಯಮೂಲಕ ತೂರಿಸಿ ಹೃದಯ ಸ್ನಾಯುವಿನೊಳಗೆ ಸೇರಿಸಲಾಗುತ್ತದೆ. ಹೃತ್ಕರ್ಣದ (ಏಟ್ರಿಯಂ) ಲೀಡ್‍ಗಳನ್ನು ಸಾಮಾನ್ಯವಾಗಿ ಬಲಹೃತ್ಕರ್ಣದ ಕೂಡು ಭಾಗದಲ್ಲಿ ಸೇರ್ಪಡೆಮಾಡಿದರೆ, ಹೃತ್ಕುಕ್ಷಿಯ ವೆಂಟ್ರಿಕಲ್) ಲೀಡ್‍ಗಳನ್ನು ಬಲಹೃತ್ಕುಕ್ಷಿಯ ಶೃಂಗದಲ್ಲಿ ಇರಿಸಲಾಗುತ್ತದೆ. ಹೃದಯ ಸ್ನಾಯುವಿಗೆ ಈ ಲೀಡ್‍ಗಳನ್ನು ಟೈನ್ (ವೇನೆ)ಯಿಂದಾಗಲೀ, ಇಲ್ಲವೇ ತಿರುವಿನಿಂದಾಗಲೀ ಬಂಧಿಸಲಾಗುತ್ತದೆ.
	ಗತಿ ರೂಪಿಸುವ ವಿಧಾನವನ್ನು ಶಾರ್ಟ್ ಹ್ಯಾಂಡ್ ರೂಪದಲ್ಲಿ 3 ರಿಂದ 5 ಅಕ್ಷರಗಳ ಸಂಕೇತ (ಕೋಠ್)ದಿಂದ ವಿವರಿಸಲ್ಪಡುತ್ತದೆ. ಅದರಲ್ಲಿನ ಮೊದಲನೆಯ ಅಕ್ಷರವು ಹೃದಯದಲ್ಲಿನ ಯಾವ ಕೋಣೆ- ಏಟ್ರಿಯಂ (ಎ), ವೆಂಟ್ರಿಕಲ್ (ವಿ) ಅಥವಾ ಎರಡೂ ಕೋಣೆಗಳನ್ನು (ಡಿ)ಸಂಕೇತಿಸುತ್ತದೆ. ಎರಡನೇ ಅಕ್ಷರವು ಲೀಡ್ ಯಾವ ಕೋಣೆಯನ್ನು ತನ್ನ ಅರಿವಿನ (ಸೆನ್ಸ್) ಪ್ರಭಾವದಲ್ಲಿ ತರುತ್ತದೆ. ಎಂಬುದನ್ನು ಸೂಚಿಸುತ್ತದೆ. ಅದು ಎ. ವಿ. ಡಿ. ಆಗಿರಬಹುದು; ಇಲ್ಲವೆ ಯಾವುದೂ ಆಗಿರದಿರಬಹುದು (ಒ). ಮೂರನೇ ಅಕ್ಷರ ಪೇಸ್ ಮೇಕರ್ ಯಾವುದಾದರೂ ನಿರ್ಬಂಧ (ಇನ್‍ಹಿಬಿಷನ್) ಅಡಿ (ಐ) ಕಾರ್ಯ ಮಾಡುತ್ತಿರುವುದೋ ಅಥವಾ ಪಥ (ಟ್ರಾಕ್) ಹಿಂಬಾಲಿಸುವ ರೂಪ (ಟಿ) ದಲ್ಲಿರುವುದೋ, ಇಲ್ಲವೆ ಅವೆರಡೂ ಮೇಕ್ (ರೂಪ)ಗಳನ್ನು (ಡಿ) ಹೊಂದಿರುವುದೋ ಅಥವಾ ಇಲ್ಲವೋ (ಒ) ಎಂಬುದನ್ನು ಸೂಚಿಸುತ್ತದೆ.
	ನಾಲ್ಕನೇ ಅಕ್ಷರವು ಪೇಸ್ ಮೇಕರ್ ಏಟ್ರಿಯಂ ಕಾರ್ಯಕ್ಕೆ ಭಿನ್ನವಾಗಿ ತಾನೇ ಸ್ವತಂತ್ರವಾಗಿ ಬದಲುಗೊಳಿಸುವುದೋ ಹೇಗೆಂಬುದನ್ನು ಸಂಕೇತಿಸಿದರೆ ಐದನೇ ಅಕ್ಷರ, ಗತಿರೂಪವು ವೇಗನಾಡಿಯ ಪ್ರತಿರೋಧಕವಾಗಿ ಪೇಸಿಂಗ್(ಪಿ) ಮಾರುವುದೋ ಅಥವಾ ಅಘಾತಗಳನ್ನೂ (ಶಾಕ್, ಎಸ್‍ಗಳನ್ನು ಕೊಡುವುದರ ಮೂಲಕ ಮಾಡುವುದೋ ಇಲ್ಲವೆ ಎರಡು ಬಗೆಯಲ್ಲಿ(ಡಿ) ಕೆಲಸಮಾಡುವುದೋ ಎಂಬುದನ್ನು ಸಂಕೇತಿಸುತ್ತದೆ.
	ಸಾಮಾನ್ಯ ಬಳಕೆಯ ಪೇಸಿಂಗ್ ವಿವಿಡಿ. ಅದು ಒಂದು ಕಟ್ಟುಪಾಡಿನಲ್ಲಿ ಹೃತ್ಕುಕ್ಷಿಯೊಳಗೆ ಪೇಸಿಂಗ್ ಮಾಡುವುದಲ್ಲದೆ ಜರುಗುತ್ತಿರುವ ಘಟನೆಗಳ ಅರಿವು ಪಡೆದಿರಬಹುದಾಗಿದೆ. ಇದರ ಜೊತೆ ವೇಗಗತಿ ಮತ್ತು ಪ್ರತಿಕ್ರಿಯಿಸುವ ಸಾಮಥ್ರ್ಯ ಪಡೆದಿದ್ದರೆ ಅದು ವಿವಿಡಿ ಆರ್. ಡಿಡಿಡಿಯಲ್ಲಿ ಹೃತ್ಕರ್ಣ ಮತ್ತು ಹೃತ್ಕುಕ್ಷಿಯ ಪೇಸಿಂಗ್ ಮತ್ತು ಸೆನ್ಸಿಂಗ್ ಮಾಡುವುದಕ್ಕಾಗಿ ಅದು ಒಂದು ಕಟ್ಟುಪಾಡಿನಲ್ಲಿ ಪಥದ ಮೂಲಕ ಕಾರ್ಯನಿರ್ವಹಿಸತ್ತದೆ.
	ಯಾವರೀತಿಯ ಪೇಸಿಂಗ್ ಉಪಯೋಗಿಸಬಹುದು ಎಂಬುದನ್ನು ವ್ಯಕ್ತಿಗತನಾಗಿ ನಿರ್ಧರಿಸಲಾಗುತ್ತದೆ ಅದು ವ್ಯಕ್ತಿಯ ಶಾರೀರಕಕ್ರಿಯೆ ಮತ್ತು ಅವಶ್ಯಕತೆಗಳನ್ನು ಪೂರೈಸುವಂತಿರಬೇಕು ಮತ್ತು ಸರಳವಾಗಿರಬೇಕು.
	ಶಾಶ್ವತ ಪೇಸ್ ಮೇಕರ್: ಗತಿರೂಪಕವನ್ನು ಶಾಶ್ವತವಾಗಿ ಇರಿಸುವುದು ಮಂದನಾಡಿಯಿಂದ ತೊಂದರೆಗಳು ಗೋಚರಿಸಿದಾಗ ಇಲ್ಲವೆ ವೇಗನಾಡಿ ಹೊಂದಿ ಪ್ರಕಟಗೊಳ್ಳುವ ಸಂಭಾವ್ಯವನ್ನು ತಪ್ಪಿಸಲೋಸುಗ ಮಂದನಾಡಿಯಿಂದ ವ್ಯಕ್ತಿ ತಲೆಸುತ್ತು, ಕಣ್ಣಿಗೆ ಕತ್ತಲೆ, ಏಕಾಏಕಿ ಎಚ್ಚರ ತಪ್ಪುವಿಕೆ, ವ್ಯಾಯಾಮ ಮಾಡಲು ಸಾಧ್ಯವಿಲ್ಲದಿರುವುದು, ಹಗುರತಲೆ, ಇಲ್ಲವೆ ಹೃದಯ ಸೋಲುವಿಕೆ ಲಕ್ಷಣಗಳನ್ನು ಹೊಂದಿರಬಹುದು. ಅಲ್ಲಿ ಏಟ್ರಿಯಂ ಮತ್ತು ವೆಂಟ್ರಿಕಲ್ ನಡುವೆ ಇರುವ ವಹನ ವ್ಯವಸ್ಥೆಯಲ್ಲಿ ತೀವ್ರತರ ಅಡ್ಡಿಯಿರುತ್ತದೆ. ಅಂತಹ ತೊಂದರೆ ಹೃದಯಾಘಾತದ ನಂತರವೂ ಗೋಚರಿಸಬಹುದು. ಇಲ್ಲವೆ ಬಡವೆ ಹಜಾರ (ಸೈನೋ ಏಟ್ರಿಯಲ್)ಗಂಟು ಕಾರ್ಯವಿಮುಖವಾಗಿರಬಹುದು.
	ರೋಗಿಗೆ ಪೇಸ್‍ಮೇಕರ್ ಸಲಹೆಮಾಡುವ ಮೊದಲು ಅವರಲ್ಲಿ ಥೈರಾಯಿಕ್ ಗ್ರಂಥಿಯ ಕಾರ್ಯ ಕುಗ್ಗಿರುವುದು, ರಿಜಿಟಾಲಿಸ್ ವಿಷ ಪ್ರಭಾವ, ಎಲೆಕ್ಟ್ರೊಲೈಟ್ ವ್ಯತ್ಯಯಗಳು, ಬೀಟಾ ತಡೆಗಳು (ಬ್ಲಾಕರ್) ಕ್ಯಾಲ್ಸಿಯಂ ಕಾಲುವೆ ತಕಗಳು ಅಥವಾ ತತ್ತರಿಕೆ (ಅಂಥ್ಮಿಯ) ವಿರೋಧಿ ಔಷಧಿಗಳನ್ನು ಸೇವಿಸದಿರುವುದರ ಬಗ್ಗೆ ಖಾತ್ರಿಮಾಡಿಕೊಳ್ಳಬೇಕು ಇಲ್ಲವೆ ಅಂತಹ ರೋಗಗಳಿದ್ದರೆ ಅವುಗಳ ಚಿಕಿತ್ಸೆ ಮಾಡಬೇಕು. ಪೇಸ್ ಮೇಕರ್ ಇರಿಸುವಾಗ ಅಪರೂಪವಾಗಿ ಎದೆಗೂಡಿನಲ್ಲಿ ಗಾಳಿಸೇರ್ಪಡೆ, ಏಟ್ರಿಯಂನಲ್ಲಿ ತೂತು, ತೋರಿಬರಬಹುದು. ಲೀಡ್ ಇರಿಸಿದ ಮೇಲೆ ಲೀಡ್ ಸ್ಥಳ ಪಲ್ಲಟಗೊಳ್ಳಬಹುದು; ಸೋಂಕು ಸೇರಿಕೊಳ್ಳಬಹುದು. ಇಲ್ಲವೆ ಶಿರೆಯಲ್ಲಿ ರಕ್ತಕರಣೆ ಯುಂಟಾಗಬಹುದು.
	 ತಾತ್ಕಾಲಿಕ ಪೇಸ್‍ಮೇಕರ್: ಇಲ್ಲಿ ಲೀಡ್‍ನ್ನು ಚರ್ಮದ ಮೂಲಕ ಕೇರಳ ಶಿರೆಯೊಳಕ್ಕೆ ತೂರಿಸಿ, ಎಕ್ಸ್-ಕಿರಣ ನೀಡುವ ಚಿತ್ರದ ಮಾರ್ಗದರ್ಶನದಡಿಯಲ್ಲಿ ಬಲಹೃತ್ಕುಕ್ಷಿಯ ಶೃಂಗದಲ್ಲಿ ಇರಿಸಲಾಗುವುದು. ಅದಕ್ಕೆ ಹೊರಗಿನ ಶಕ್ತಿ ಸ್ಥಾವರದೊಂದಿಗೆ ಸಂಬಂಧ ಕಲ್ಪಿಸಲಾಗುವುದು. ಶಾಶ್ವತ ಪೇಸ್ ಮೇಕರ್ ಇರಿಸುವ ಮೊದಲು ರೋಗಿಯ ಸ್ಥಿತಿಯನ್ನು ಸ್ಥಿರಗೊಳಿಸಲು, ಔಷಧಿಗಳು ಮತ್ತು ಎಲಕ್ಟ್ರೊಲೈಟ್ ಪ್ರಭಾವದಿಂದ ಮಂದನಾಡಿ ತಲೆದೋರಿದ್ದಾಗ ಅಲ್ಪ ಕಾಲಾವಧಿ ಇವುಗಳಲ್ಲಿ ಬಳಸಬಹುದು. ಸೋಂಕು ಇದರ ಮುಖ್ಯ ಸಮಸ್ಯೆ. ಅದಕ್ಕಾಗಿ ತಾತ್ಕಾಲಿಕ ಪೇಸ್ ಮೇಕರನ್ನು 48 ಘಂಟೆಗಳ ಕಾಲಾವಧಿ ಮಾತ್ರ ಬಳಸಬಹುದು.
	 ಪೇಸ್ ಮೇಕರ್ ಧರಿಸಿದವರು ಎಂ. ಆರ್. ಡಿ. ನಂತಹ ಪರೀಕ್ಷೆಗಳಿಗೆ ಒಳಪಡುವಂತಿಲ್ಲ, ಅಲ್ಲಿರುವ ಅಯಸ್ಕಾಂತ ಅವರ ಮೇಲೆ ದುಷ್ಟರಿಣಾಮ ಬೀರುತ್ತದೆ. ಪೇಸ್ ಮೇಕರ್ ಧರಿಸಿದವರು ನಿಯಮಿತವಾಗಿ ವೈದ್ಯ ಪರೀಕ್ಷೆಗೊಳಪಡಬೇಕು.
		(ಪಿ.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ